ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ. Read more »

ನಾಗೇಶ್‌ ಹೆಗಡೆ : ಬಿಳಿ ಮುಖಕ್ಕೆ, ಚಿರಯೌವನಕ್ಕೆ ಮಾಯಾ ಮುಲಾಮು

ಇದರಲ್ಲೇನೋ ವ್ಯಂಗ್ಯದ ವಾಸನೆ ಹೊಡೆಯಿತೆ? ಹೌದು, ನಮ್ಮ ದೇಶದ ಜನರ ಬದುಕಿನಲ್ಲಿ ಸಾವಿರ ಸಾವಿರ ಸಮಸ್ಯೆಗಳಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಇಂತಹ ಸೌಂದರ್ಯ ಪ್ರಸಾಧನಕ್ಕೆ ಆದ್ಯತೆ ಕೊಡುವುದು ಈ ಕಾಲದ ವ್ಯಂಗ್ಯವೇ ಹೌದು. Read more »

ನಾಗೇಶ್‌ ಹೆಗಡೆ : ಮರಣಶಯ್ಯೆಯಲ್ಲಿ ಇಂಡಿಯಂ, ದೂಳಿನಲ್ಲಿ ಪ್ಲಾಟಿನಂ

ಇಂಧನ ತೈಲವೇ ಜಾಗತಿಕ ಸಂಘರ್ಷಗಳಿಗೆ ಕಾರಣವೆಂದು ತಿಳಿದಿದ್ದವರು ಈಗ ಅದಕ್ಕಿಂತ ಮಹತ್ವದ ವಿರಳ ಲೋಹಗಳತ್ತ ಗಮನ ಹರಿಸುತ್ತಿದ್ದಾರೆ. ಜಗತ್ತಿನ ಕೆಲವೇ ಕೆಲವು ತಾಣಗಳಲ್ಲಿ ಸಾಂದ್ರವಾಗಿ ಅದಿರಿನ ನಿಕ್ಷೇಪಗಳಾಗಿ ಕೂತಿರುವ ಇವು ಹೊಸ ಸಂಘರ್ಷಕ್ಕೆ ನಾಂದಿ ಹಾಡುತ್ತಿವೆ. Read more »

ನಾಗೇಶ್‌ ಹೆಗಡೆ: ಶತಕೋಟಿ ಚೀನೀಯರು ಕುಪ್ಪಳಿಸಿದಾಗ…

ನಗರದ ಬೆಳಕಿನ ಮಾಲಿನ್ಯದಿಂದ ದೂರವಾಗಿ, ಮಿಥುನರಾಶಿಯಿಂದ ಬರುವ ಮನ್ಮಥಬಾಣಗಳನ್ನು ನೋಡಿ ಚಕಿತರಾಗೋಣ. ಉಲ್ಕಾಪಾತ ನೋಡಲು ಹೈಟೆಕ್ ತಂತ್ರಜ್ಞಾನ ಬೇಕಿಲ್ಲ. ಹಳ್ಳಿಯ ನಿಚ್ಚಳ ಆಕಾಶ ಸಾಕು; ಸ್ವೆಟರ್ ತೊಟ್ಟು ಸಂಗಾತಿಯೊಂದಿಗೆ ರಾತ್ರಿ ಅಂಗಳಕ್ಕಿಳಿದು ಬರಿಗಣ್ಣಿನಲ್ಲಿ ಆಕಾಶ ನೋಡೋಣ. ಪಶ್ಚಿಮಕ್ಕಲ್ಲ, ಪೂರ್ವಕ್ಕೆ ಮುಖ ಮಾಡಿ! Read more »

ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?

ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ?

ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು ಶುದ್ಧೀಕರಿಸಿದ ದಿನಸಿ ವಸ್ತುಗಳನ್ನು ಕೊಂಡು, ಗಣಕದಲ್ಲೇ ಬಿಲ್ ಪಡೆದು, ಕಾರ್ಡಿನ ಮೂಲಕವೇ ಪಾವತಿ ಮಾಡುವುದು ಈ ಜಗತ್ತಿನ ಹಲವರ ಸಹಜ ಕೃತ್ಯವಾಗಿದೆ. Read more »

ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ

  • ಆಗ ನನಗೆ ಎರಡು ವರ್ಷ. ನಾನು ಆಗಿನ ಕಾಲದಲ್ಲಿ ನಮ್ಮೂರಿನ ಮಹಿಳೆಯರು ಸ್ನಾನ ಮಾಡಲು ಬಳಸುತ್ತಿದ್ದ ದೊಡ್ಡ ಹಳ್ಳದಲ್ಲಿ ಬಿದ್ದುಬಿಟ್ಟಿದ್ದೆ. ಆಟ ಆಡ್ತಾ ಆಡ್ತಾ ಅಲ್ಲಿ ಮುಳುಗಿಹೋದ ನಾನು ಮೇಲೆಬ್ಬಿಸಿದ ನೀರಿನ ಗುಳ್ಳೆಗಳನ್ನು ನೋಡಿ ನಮ್ಮ ಮನೆಗೆಲಸದವಳು ಓಡಿ ಬಂದು ನನ್ನನ್ನು ಎತ್ತಿದಳಂತೆ. ಹತ್ತು ವರ್ಷಗಳ ಹಿಂದೆ ಆಕೆ ತೀರಿಕೊಂಡಳು. ಆದರೆ ಕೊನೇವರೆಗೂ ಆಕೆ ನನ್ನನ್ನು ಭೇಟಿಯಾದಾಗೆಲ್ಲ ನಿನ್ನ ಬದುಕಿಗೆ ನಾನೇ ಕಾರಣ ಎಂದು ಕೀಟಲೆ ಮಾಡುತ್ತಿದ್ದಳು. ಅದು ನಿಜವೇ ಬಿಡಿ. Read more »

ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ

ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು.

ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು ಸಾಫ್ಟ್‌ವೇರನ್ನೇ ಎಡವಿ ಬಿದ್ದೆ! ಮೆಟಾಫಾಂಟ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಅದಕ್ಕೆ ಶಾಸ್ತ್ರೀಯವಾದ ವಿವರಣೆ, ಸಾಧನಗಳನ್ನು ನೀಡಿದ ಡೊನಾಲ್ಡ್ ಕನೂಥ್ ಎಂಬ ವಿಚಿತ್ರ ವ್ಯಕ್ತಿತ್ವ ನನ್ನನ್ನು ಸೆಳೆಯಿತು. ಈತ ಮಹಾನ್ ವಿಜ್ಞಾನಿಯಾದರೂ, ಅಷ್ಟೇ ಹಾಸ್ಯಪ್ರಜ್ಞೆ ಉಳ್ಳವ. ಇವನ ಮೆಟಾಫಾಂಟ್ ಪುಸ್ತಕಗಳ ಪ್ರತೀ ಪುಟದಲ್ಲೂ ಒಂದೊಂದು ತಮಾಶೆಯ ವಾಕ್ಯವನ್ನು ನೀವು ಹುಡುಕಬಹುದು! ಅವನ ವೆಬ್‌ಸೈಟಿನಲ್ಲೂ ತಮಾಶೆ ಉಕ್ಕಿ ಹರಿದಿದೆ. ಪ್ರಪಂಚದಲ್ಲಿ ಇಂಥವರೂ ಇದ್ದಾರಾ ಎಂದು ಅಚ್ಚರಿಯಾಗುವಂಥ ಸ್ವಭಾವದ ಡೊನಾಲ್ಡ್ ನುಥ್ ನನ್ನ ಕಣ್ಣಿಗೆ ಬಿದ್ದ ಮೇಲೆ ಕೇಳಬೇಕೆ? ಅವರು ಬರೆದ ಪುಸ್ತಕಗಳನ್ನೆಲ್ಲ ಇಂಟರ್‌ನೆಟ್‌ನಿಂದಲೇ ಕದ್ದು ಹಾಳೆ ತಿರುಗಿಸಿದೆ. ಇಂಥ ವ್ಯಕ್ತಿಯ ಬಗ್ಗೆ ಬರೆಯುವುದೇ ಒಂದು ಹೆಮ್ಮೆ ಅನ್ನಿಸಿಬಿಟ್ಟಿತು. ಹಾಗೇ ಹುಡುಕುತ್ತ ಹೋದಾಗ ಡೊನಾಲ್ಡ್ ಕನೂಥ್‌ನ ಸಂಶೋಧನೆಯಿಂದ ತನ್ನ ಜೀವನವನ್ನೇ ಬದಲಿಸಿಕೊಂಡು, ಸಾವನ್ನು ದೂರದೂರಕ್ಕೆ ಅಟ್ಟಿ, ಇನ್ನೂ ನೂರಾರು ಜನರ ಬಾಳಿಗೆ ಬೆಳಕಾದ ರಾಧಾಕೃಷ್ಣನ್ ಕಥೆಯೂ ಸಿಕ್ಕಿತು. ಇಬ್ಬರ ಕಥೆಯೂ ಹೇಗೆ ಪರಸ್ಪರ ಹೆಣೆದುಕೊಂಡಿದೆ ಎಂದು ನೋಡುತ್ತ ಅಚ್ಚರಿಗೆ ಬಿದ್ದೆ. ಬದುಕಿನಲ್ಲಿ ಎಡಬಿಡದೆ ಕೆಲಸ ಮಾಡಿ ಸಾಧಿಸುವುದು ಇಬ್ಬರ ಪ್ರಿಯ ಹವ್ಯಾಸ. ಹಾಗೇ ಬದುಕನ್ನು ತಮಗೆ ಬೇಕಾದ ಹಾಗೆ ಕಟ್ಟಿಕೊಳ್ಳುವುದು ಇಬ್ಬರಿಗೂ ಇಷ್ಟದ ವಿಚಾರ. ಮೊದಲು ಡೊನಾಲ್ಡ್ ಕನೂಥ್ ಕಥೆ. ಆಮೇಲೆ ರಾಧಾಕೃಷ್ಣನ್. Read more »

ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ

ಅವಳೀಗ ಐರೋಪ್ಯ ಸಮುದಾಯದ  ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ ಈಗಿನ ಅಧ್ಯಕ್ಷ (ಡಿಯರ್ ಲೀಡರ್) ಕಿಮ್ ಜೊಂಗ್ ಇಲ್‌ನೇ ಕಾರಣ. ಈಗ ಆಕೆಗೆ ೭೫ರ ವಯಸ್ಸು ದಾಟಿದೆ. ೨೦೦೩ರಲ್ಲಿ ಆಕೆ ಟೈಮ್ ಪತ್ರಿಕೆಗೆ ಕೊಟ್ಟ ಸಂದರ್ಶನವೇ ಅವಳ ಮೊಟ್ಟಮೊದಲ ಸಂದರ್ಶನ. ಅದರಿಂದಾಗಿಯೇ ಕಿಮ್‌ನ ಚಿತ್ರವಿಚಿತ್ರ ಸ್ವಭಾವಗಳು ಹೊರಜಗತ್ತಿಗೆ ತಿಳಿದವು. Read more »

ನಾಗೇಶ ಹೆಗಡೆ: ಗೋಹತ್ಯೆ ಗೋಜಲು! ಒಂದಿಷ್ಟು ವಾಸ್ತವ, ಒಂದಿಷ್ಟು ವಿಜ್ಞಾನ, ಒಂದಿಷ್ಟು ವಿವೇಕ

ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಸರಕಾರ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂಥ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?

ಮೊದಲನೆಯದಾಗಿ ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು-ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ಥಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು-ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೊ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೊ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗಿ ಕಿತ್ತುಕೊಳ್ಳುತ್ತಿದೆ. Read more »

ನಾಗೇಶ್‌ ಹೆಗಡೆ : ಅಟಕಾಮಾ ಮರುಭೂಮಿಯಲ್ಲಿ ಅಪೂರ್ವ ಓಯಸಿಸ್

ಅಕ್ಟೊಬರ್ 12-13ರಂದು ನಮ್ಮ ಸುದ್ದಿ ಮಾಧ್ಯಮಗಳು ಇಲ್ಲಿನ ರಾಜಕೀಯ ಗಬ್ಬು ಗದ್ದಲಗಳ ಕ್ಷಣಕ್ಷಣದ ವರದಿಗಾಗಿ ಪರದಾಡುತ್ತಿದ್ದಾಗ ಜಗತ್ತಿನ ಪ್ರಮುಖ ಸುದ್ದಿ ಕ್ಯಾಮರಾಗಳೆಲ್ಲ ಚಿಲಿ ದೇಶದ ಗಣಿ ಸುರಂಗವೊಂದಕ್ಕೆ ಮುಖ ಮಾಡಿ ನಿಂತಿದ್ದವು. ಅಲ್ಲಿ ಎರಡು ಸಾವಿರ ಅಡಿ ಆಳದ ಸುರಂಗದಲ್ಲಿ 69 ದಿನಗಳಿಂದ ಸಿಲುಕಿದ್ದ 33 ಕಾರ್ಮಿಕರು ಅಂದು ಗಂಟೆಗೊಬ್ಬೊಬ್ಬರಂತೆ ಮೇಲೆದ್ದು ಬರುವ ದೃಶ್ಯವನ್ನು ವಿಶ್ವಾದಾದ್ಯಂತ ಸಾವಿರಾರು ಟಿವಿ ಚಾನೆಲ್‌ಗಳು ನೇರ ಬಿತ್ತರಣೆ ಮಾಡುತ್ತಿದ್ದವು. Read more »

Follow

Get every new post delivered to your Inbox.